ಒಂದು ವಿಸ್ಪೋಟ 200ಕ್ಕೂ ಹೆಚ್ಚು ಮಂದಿ ಸಾವು ,7000 ಮಂದಿ ಗಾಯಾಳು ಮತ್ತು US $15 ಶತಕೋಟಿ ಆಸ್ತಿ ಹಾನಿ.

ಬೈರುತ್ ವಿಸ್ಪೋಟ

ಬೈರುತ್ ಇದು ಪಶ್ಚಿಮ ಏಷ್ಯಾದ ದೇಶವಾದ ಲೆಬನಾನ್ನ ರಾಜಧಾನಿ. ಲೆಬನಾನ್ ದೇಶವು ಕೆಲವು ಸಮಯದಿಂದ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿದೆ, ಇದರ ನಡುವೆ ಈ ದುರಂತವು ದೇಶವನ್ನು  ಇನ್ನಷ್ಟು ಆರ್ಥಿಕ ಬಿಕ್ಕಟಿಗೆ ಸಿಲುಕಿಸಿತು.  

ಲೆಬನಾನ್ ಧ್ವಜ 

ಆಗಸ್ಟ್ 5,2020ರಂದು ಬೈರುತಿನ(BEIRUT ) ಬಂದರಿನಲ್ಲಿ ಅಮೋನಿಯಂ ನೈಟ್ರೇಟ್ ಕಾರಣದಿಂದ ಉಂಟಾದ ಸ್ಫೋಟವು ಇಡೀ ಬಂದರನ್ನೇ ನಾಶಪಡಿಸಿತು.  

 ದ್ವಾಂಸಗೊಂಡ ಬಂದರು 

ಅಮೋನಿಯಂ ನೈಟ್ರೇಟ್ ಒಂದು ವಿಸ್ಪೋಟಕ.  ಇದನ್ನು ಕೃಷಿ ಮತ್ತು ಬಾಂಬ್ ತಯಾರಿಕೆಯಲ್ಲಿಯೂ ಬಳಸುತ್ತಾರೆ. 2011 ರಲ್ಲಿ ನಡೆದ ಡೆಲ್ಲಿ ಬಾಂಬಿಂಗ್ ಮತ್ತು 2013 ರಲ್ಲಿ ನಡೆದ ಮುಂಬೈ ಬಾಂಬಿಂಗ್ ಅಲ್ಲಿ ಇದನ್ನು ಉಪಯೋಗಿಸಲಾಗಿತ್ತು. 

ಆದರೆ ಬೈರುತ್ ಅಲ್ಲಿ ನಡೆದ ಈ ವಿಸ್ಪೋಟವು ಯಾವುದೇ ಆತಂಕವಾದಿ  ಸಂಘಟನೆಗಳು ನಡೆಸಲಿಲ್ಲ. ಇದು, 2750 ಟನ್ ಅಮೋನಿಯಂ ನೈಟ್ರೇಟ್ಟನ್ನು ಹಡಗಿನ ಮೂಲಕ  ಅಕ್ರಮವಾಗಿ ಜಾರ್ಜಿಯಾದಿಂದ ಈಸ್ಟ್ ಆಫ್ರಿಕಾಗೆ ಸಾಗಿಸುತ್ತಿರುವಾಗ  ಬೈರುತ್ ಬಂದರಿನ ಅಧಿಕಾರಿಗಳು ಸರಿಯಾದ ದಾಖಲೆಗಳು ಇರದ ಕಾರಣದಿಂದ ಹಡಗನ್ನು ವಶಪಡಿಸಿಕೊಂಡರು. 

2 ವರ್ಷಗಳಾದರೂ ಸರಿಯಾದ ದಾಖಲೆ ಒದಗಿಸದ ಕಾರಣ ಹಡಗಿನಲ್ಲಿದ್ದ 2750 ಟನ್ ಅಮೋನಿಯಂ ನೈಟ್ರೇಟ್ಟನ್ನು ಬಂದರಿನ ಗೋದಾಮಿನಲ್ಲಿ ಸಂಗ್ರಹಿಸಿ ಇಟ್ಟರು. ಅಮೋನಿಯಂ ನೈಟ್ರೇಟ್ ಒಂದು ವಿಸ್ಪೋಟಕ,ಇದನ್ನು ಸಂಗ್ರಹಿಸಿ ಇಡಲು ಸುಮಾರು ಮುಂಜಾಗ್ರತಾ ಕ್ರಮಗಳಿವೆ. ಆದರೆ ಬೈರುತ್ ಬಂದರಿನಲ್ಲಿ ಇದನ್ನು ಸಾಮಾನ್ಯ ಗೋದಾಮಿನಲ್ಲಿ ಇದನ್ನುಇರಿಸಿದರು. 


ಸ್ಪೋಟದಿಂದ ಹಾನಿಗೀಡಾದ ಕಟ್ಟಡಗಳು 

ಸರಿಯಾದ ಮುಂಜಾಗೃತಾ ಕ್ರಮಗಳು ಹೊಂದಿರದ ಕಾರಣದಿಂದ ಅಮೋನಿಯಂ ನೈಟ್ರೇಟ್ ವಿಸ್ಪೋಟಗೊಂಡಿದೆ .ಇದರ ವಿಸ್ಪೋಟವು ಇಡೀ ಬೈರುತ್ ನಗರವನ್ನೇ ಹಾನಿಗೊಳಿಸಿತು,200ಕ್ಕೂ ಹೆಚ್ಚು  ಜನ ಸಾವನ್ನಪಿದರು,7000 ಮಂದಿ ಗಾಯಳುಗೊಂಡರು ಮತ್ತು US$15 ಶತಕೋಟಿ ಆಸ್ತಿಹಾನಿಯಾಯಿತು. 

ಇದರ ವಿಸ್ಪೋಟ ಎಷ್ಟು ತೀವ್ರವಾಗಿತೆಂದರೆ ನೆರೆಯ ದ್ವೀಪ ಸೈಪ್ರಸ್ ವರೆಗೂ ಗೋಚರ ಗೊಂಡಿತು. 

Comments