ಇದು ಕೆನಡಾದ ಇತಿಹಾಸದಲ್ಲಿಯೇ ಸಂಭವಿಸಿದ ಅತ್ಯಂತ ಭೀಕರ ರೈಲು ಅಪಘಾತ !
ಲ್ಯಾಕ್-ಮೆಗಾಂಟಿಕ್ ರೈಲು ದುರಂತ :
ಲ್ಯಾಕ್-ಮೆಗಾಂಟಿಕ್ ರೈಲು ದುರಂತವು ಜುಲೈ 6, 2013 ರಂದು ಕೆನಡಾದ ಕ್ವಿಬೆಕ್‌ನ ಲ್ಯಾಕ್-ಮೆಗಾಂಟಿಕ್ ಎಂಬ ಸಣ್ಣ ಪಟ್ಟಣದಲ್ಲಿ ಸಂಭವಿಸಿದ ದುರಂತ ಘಟನೆಯಾಗಿದೆ. ಕೆನಡಾದ ಇತಿಹಾಸದಲ್ಲಿ ಇದು ಅತ್ಯಂತ ಭೀಕರ ರೈಲು ಅಪಘಾತಗಳಲ್ಲಿ ಒಂದಾಗಿದೆ, ಇದರ ಪರಿಣಾಮವಾಗಿ 47 ಜನರು ಸಾವನ್ನಪ್ಪಿದರು ಮತ್ತು ಪಟ್ಟಣದ ಅರ್ಧದಷ್ಟು ಭಾಗ ದ್ವಾಂಸವಾಯಿತು.
ದ್ವಾಂಸಗೊಂಡ ಲ್ಯಾಕ್-ಮೆಗಾಂಟಿಕ್ ನಗರ (Courtesy - Sûreté du Québec- https://twitter.com/sureteduquebec/status/353519189769732096/photo/1)
ಜುಲೈ 5, 2013 ರ ಸಂಜೆ, ರಾತ್ರಿ ಸುಮಾರು 10:50 ಗಂಟೆಗೆ, ಮಾಂಟ್ರಿಯಲ್,ಮೈನೆ ಮತ್ತು ಅಟ್ಲಾಂಟಿಕ್ ರೈಲ್ವೆ ಸಂಸ್ಥೆಯ MMA 5017 ರೈಲು 7 ಮಿಲಿಯನ್ ಲೀಟರ್ ಕಚ್ಚಾತೈಲವನ್ನು ಉತ್ತರ ಡಕೋಟಾದಿಂದ ನ್ಯೂ ಬ್ರನ್ಸ್‌ವಿಕ್‌ನಲ್ಲಿರುವ ಸಂಸ್ಕರಣಾ ಘಟಕಕ್ಕೆ ಸಾಗಿಸುತ್ತಿತು. ರಾತ್ರಿಯಾದ ಕಾರಣದಿಂದ ರೈಲನ್ನು ಲ್ಯಾಕ್-ಮೆಗಾಂಟಿಕ್ ಇಂದ 7 ಮೈಲಿ ದೂರದಲ್ಲಿರುವ ನಾಂಟೆಸ್ ಅಲ್ಲಿ ಇರುವ ರೈಲ್ವೆ ನಿಲ್ದಾಣದ ಮುಖ್ಯ ಮಾರ್ಗದಲ್ಲಿ ನಿಲ್ಲಿಸಲಾಗಿತ್ತು. ಇಂಜಿನಿಯರ್ ರೈಲನ್ನು ನಿಲ್ಲಿಸಿದಾಗ ಅದರ ಲೋಕೋಮೋಟಿವ್ ಚಾಲನೆಯಲ್ಲಿತ್ತು,ಇದು ಏರ್-ಬ್ರೇಕಿಂಗ್ ವ್ಯವಸ್ಥೆಯನ್ನು ನಿರ್ವಹಿಸುತ್ತದೆ. ಇಂಜಿನಿಯರ್ ಒಬ್ಬರೇ ಇದ್ದಿದ್ದರಿಂದ ಎಲ್ಲ ಹ್ಯಾಂಡ್ ಬ್ರೇಕ್ ಅನ್ವಯಿಸಲು ಸಾಧ್ಯವಾಗಲಿಲ್ಲ ಮತ್ತು ರೈಲನ್ನು ಇಳಿಮುಖವಾಗಿ ನಿಲ್ಲಿಸಲಾಗಿತ್ತು.
MMA 5017 ರೈಲು (Courtesy-flicker.com)
ಇಂಜಿನಿಯರ್ ಮನೆಗೆ ತೆರಳಿದ ಸ್ವಲ್ಪ ಸಮಯದ ನಂತರ ರೈಲಿನ ಮುಖ್ಯ ಇಂಜಿನಲ್ಲಿ ಬೆಂಕಿ ಕಾಣಿಸಿಕೊಂಡಿತು, ತಕ್ಷಣ ಬಂದ ಅಗ್ನಿಶಾಮಕದಳದವರು ಬೆಂಕಿಯನ್ನು ನಂದಿಸಿ, ರೈಲಿನ ಏರ್-ಬ್ರೇಕಿಂಗ್ ಸಿಸ್ಟಮಿನ ಭಾಗವಾದ ರೈಲಿನ ಇಂಜಿನ್ನನ್ನು ಆಫ್ ಮಾಡಿದರು. ಎಂಜಿನ್ ಆಫ್ ಆದ ಕಾರಣದಿಂದ ಏರ್-ಬ್ರೇಕಿಂಗ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿತು.
ಲ್ಯಾಕ್-ಮೆಗಾಂಟಿಕ್ ನಗರ (Courtesy- Transportation Safety Board of Canada)
ಜುಲೈ 6 ರ ಬೆಳ್ಳಿಗ್ಗೆ1 ಗಂಟೆಗೆ, ಏರ್-ಬ್ರೇಕಿಂಗ್ ಸಂಪೂರ್ಣ ಕಾರ್ಯನಿರ್ವಹಿಸಿದ ಕಾರಣ ರೈಲು ಲ್ಯಾಕ್-ಮೆಗಾಂಟಿಕ್ ಪಟ್ಟಣದ ಕಡೆಗೆ ಚಲಿಸಲು ಪ್ರಾರಂಭಿಸಿತು. ಇಳಿಜಾರಿನ ಕಾರಣದಿಂದ ರೈಲು ಗಂಟೆಗೆ 100ಕಿ.ಮೀ ಚಲಿಸುವ ಸಾಮರ್ಥ್ಯವನ್ನು ಪಡೆದುಕೊಂಡಿತು. 1.15 AM ನ ಸುಮಾರಿಗೆ ರೈಲು ಲ್ಯಾಕ್-ಮೆಗಾಂಟಿಕ್ ನಗರದ ಮದ್ಯಭಾಗವನ್ನು ಸಮೀಪಿಸುತಿದಂತೆ ಅತಿಯಾದ ವೇಗದ ಕಾರಣದಿಂದ ಹಳಿತಪ್ಪಿತು. ಇದರ ಕಾರಣದಿಂದ 6 ಮಿಲಿಯನ್ ಲೀಟರ್ ಕಚ್ಚಾತೈಲ ಸೋರಿಕೆಯಾಗಿ ಸ್ಫೋಟಗೊಂಡಿತು. ಈ ಸ್ಪೋಟದ ಕಾರಣದಿಂದ ಸ್ಥಳದಲ್ಲಿಯೇ 47 ಜನರು ಸಾವನ್ನಪಿದರು ಮತ್ತು 2000 ಜನರನ್ನು ಬಲವಂತವಾಗಿ ತಮ್ಮಮನೆಗಳಿಂದ ಸ್ಥಳಾಂತರಿಸಲಾಯಿತು. ಈ ದುರಂತದ ಪರಿಣಾಮವಾಗಿ ಸುಮಾರು 40 ಬಿಲ್ಡಿಂಗ್ಗಳು ನಾಶವಾದವು.
Comments
Post a Comment